ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆ ರಂಗೋಲಿ ಮೆಟ್ರೋ ಕಲಾ ಕೇಂದ್ರದಲ್ಲಿ ಇಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಯುವಕ ಸಂಘದ ಆರ್ಟ್ ಮ್ಯಾಟರ್ಸ್ ಮತ್ತು ಫ್ರೀ ಸ್ಪೇಸ್ ರಂಗೋಲಿ ಮೆಟ್ರೋ ಕಲಾ ಕೇಂದ್ರದ ಸಹಯೋಗದೊಂದಿಗೆ ಕರ್ನಾಟಕ ಕಲಾ ಸಂಭ್ರಮ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮವನ್ನು ಯುವಕ ಸಂಘದ ಮಾರ್ಗದರ್ಶಕರಾದ ಗಿರೀಶ್ ರವರು ಮತ್ತು ಜನಪದ ಗಂಗಣ್ಣ ಹಾಗೂ ಡಾ ಕುರುವ ಬಸವರಾಜ್ ರವರು ಉದ್ಘಾಟಸಿ ಕಂಪು, ಇಂಪು, ಸಂಪು ಆಗಿರುವ ನಮ್ಮ ಕನ್ನಡ ಭಾಷೆಯನ್ನು ಬಳಸಿಕೊಂಡು ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು. ಭಾಷೆಯಲ್ಲಿ, ಸಂಸ್ಕೃತಿಯಲ್ಲಿ, ದಿನನಿತ್ಯದ ಜೀವನದಲ್ಲಿ ಭಾಷೆಯನ್ನು ಕುರಿತು ಡಾ ಕುರುವ ಬಸವರಾಜ ರವರು ಮಾತನಾಡಿದರು.
ಕನ್ನಡ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿವಿಧ ಸ್ಪರ್ಧೆಗಳು. ಜನಪದ ಸಮೂಹ ಗಾಯನ, ಜನಪದ ಸಮೂಹ ನೃತ್ಯ, ಚಿತ್ರಕಲಾ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಇದರೊಡನೆ ಎಂ.ಜಿ. ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ ನಲ್ಲಿ ಕರ್ನಾಟಕದ ಶ್ರೀಮಂತಿಕೆಯನ್ನು ಹೆಚ್ಚಿಸಿದ ಉಡುಗೆ ತೊಡುಗೆಯ ಶೋಭಾಯಾತ್ರೆ. ಇದರಲ್ಲಿ ಡೊಳ್ಳುಕುಣಿತ, ಕಂಸಾಳೆ, ವೀರಗಾಸೆ, ಪೂಜಾ ಕುಣಿತ, ಹೆಜ್ಜೆ ಕುಣಿತ, ಜೇನು ಕುರುಬರ ಗಾಯನ ಕುಣಿತದ ಮೂಲಕ ನೆರೆದಿದ್ದ ಜನರ ಗಮನ ಸೆಳೆದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ 32 ಕಾಲೇಜುಗಳಿಂದ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು
